Dasara padagalu on Narasimha devaru — КиберПедия 

Эмиссия газов от очистных сооружений канализации: В последние годы внимание мирового сообщества сосредоточено на экологических проблемах...

Поперечные профили набережных и береговой полосы: На городских территориях берегоукрепление проектируют с учетом технических и экономических требований, но особое значение придают эстетическим...

Dasara padagalu on Narasimha devaru

2022-11-27 29
Dasara padagalu on Narasimha devaru 0.00 из 5.00 0 оценок
Заказать работу

(Purandara dasaru)

 

 

1.    Narasimhana paada

2.    simha roopa nadha sri hari

3.    idhu enanga mohanga

4.    yenu kaarana baaya theredhiyo

5.    Narasimha prathrurbhava(kannada)

6.    Narasimha mantravu

7.    Karunadimnda karava pidiyo

8.    Bhaala bhaara ninnolhaakide

9.    Kaayo shreenaarasimha

10.  Thangi kele

11.  Narasimha vajra

12.  Uddhavusidhu kambadhi

13.  Mahadadi deva namo

14.  Kande na uddanda narasimhana

15.  Nambide ninna pada narasimha

16.  Banda simha narasimha

17.  Balire balire narasimha

18.  Namo namaste narasimha deva

19.  Narasimha pahi lakshmi

20.  Sri narasimhadeva saranagata

 

***


 

Narasimhana paada

 

ನರಸಿಂಹನ ಪಾದ ಭಜನೆಯ ಮಾಡೋ ॥ ಪ ॥

narasiṃhana pāda bhajanĕya māḍo..pa..

 

ದುರಿತ ಪರ್ವತವ ಖಂಡಿಸುವ ಕುಲಿಶದಂತೆ ॥ಅ.ಪ॥

ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ ॥೧॥

ತರಳನ ಮೊರೆ ಕೇಳಿ ತ್ವರಿತದಲಿ ಬಂದು
ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ ॥೨॥

ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಠಲ ॥೩॥

 

***

 

Simha roopa nadha sri hari

ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ ॥ ಪ ॥

 

ಒಮ್ಮನದಿಂದ ನಿಮ್ಮನು ಭಜಿಸಲು
ಸಮ್ಮತದಿಂದಲಿ ಕಾಯುವೆನೆಂದ ಹರಿ ॥ಅ.ಪ॥

 

ತರಳನು ಕರೆಯೆ ಸ್ಥಂಭವು ಬಿರಿಯೇ
ತುಂಬಾ ಉಗ್ರವನು ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರಳನ ಸಲಹಿದ ಶ್ರೀ ನರಸಿಂಹನೆ ॥೧॥

ಭಕ್ತರೆಲ್ಲ ಕೂಡಿ ಬಹು ದೂರ ಓಡಿ
ಪರಮ ಶಾಂತವನು ಬೇಡಿದರು
ಕರೆದು ತನ್ನ ಸಿರಿಯನು ತೊಡೆಯೊಳು ಕುಳಿಸಿದ
ಪರಮ ಹರುಷವನು ಹೊಂದಿದ ಶ್ರೀ ಹರಿ ॥೨॥

ಜಯ ಜಯ ಜಯವೆಂದು ಹೂವನು ತಂದು
ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ
ಭಯ ನಿವಾರಣ ಭಾಗ್ಯ ಸ್ವರೂಪನೇ
ಪರಮ ಪುರುಶ ಶ್ರೀ ಪುರಂದರ ವಿಟ್ಟಲನೆ ॥೩॥

 

***

 

Idhu enanga mohananga

 

ಇದು ಏನಂಗ ಮೋಹನಾಂಗ ।
ಮದನಜನಕ ತೊರವೆಯ ನರಸಿಂಗ ॥

ಸುರರುತುತಿಸಿ ಕರೆಯೆ ತುಟಿಯ ।
ಮಿಸುಕದವತೆರೆದೆ ಏತಕೆ ಬಾಯ ತೆರನ ಪೇಳೊಮ್ಮೆ॥

ವರನೀಲರತುನ ಮಾಣಿಕದ ಹಾರಗಳಿರೆ ।
ಕೊರಳೊಳು ಕರುಳ ಮಾಲೆಯ ನಿಟ್ಟು ಮೆರೆವುದು ॥

ಸಿರಿಮುದ್ದು ನರಸಿಂಹ ಪುರಂದರವಿಠಲ ।
ಸಿರಿಯಿಪ್ಪ ತೊಡೆಯಲಿ ಅರಿಯ ತಂದಿಡುವುದು ॥

 

***

 

Yenu kaarana baaya theredhiyo

ಏನು ಕಾರಣ ಬಾಯಿ ತೆರೆದಿ – ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ॥pa॥

 

ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯ
ನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ
ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯ
ಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ ॥1॥

ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯ
ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ
ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ
ಮರೆತು ಮಾವನ ಕೊಂದು ನಿಂದೆ – ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ ॥2॥

ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯ
ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ
ಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ
ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ ॥3॥

 

***

 

Narasimha prathrurbhava (kannada)

 

This is one of my favorite songs from Mysore Ramachandra Achar kacheri. This is a masterpiece song performed by him. I am sure everyone who witnessed his kacheri live would have felt goosebumps. He tooks us to the avathara time of Lord narasimha itself. What a wonderful lyrics purandara dasaru has composed in this song. I have seen so many kacheris of him where people requesting him to sing this particular song for them. The music, Jaankate sound, his powerful vocals, beautiful pictures all together gives the listener a divine experience. I attached his performance from a youtube link.

 

ನಾರಸಿಂಹನೆಂಬೊ ದೇವನು ನಾರಸಿಂಹನೆಂಬೊ ದೇವನು ।
ನಂಬಿದಂಥ ನರರಿಗೆಲ್ಲ ವರವಕೊಡುವನು ।ಪ।

 

ಆದಿಯಲ್ಲಿ ಲಕ್ಷ್ಮೀಸಹಿತದಿ ಮಲಗಿರಲು
ಬಂದರಾಗ ಸನತ್ಕುಮಾರರು
ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು ಅಸುರರಾಗಿ ಪುಟ್ಟಿರೆಂದರು ॥ ನಾರಸಿಂಹ ॥

ದ್ವಿತೀಯ ಗರ್ಭದಲ್ಲಿ ಜನಿಸಿದ ಹಿರಣ್ಯಾಕ್ಷ
ಹಿರಣ್ಯಕಶಿಪುರೆಂಬ ಭ್ರಾತೃರು
ಪೃಥ್ವಿಯನ್ನು ಮುಳುಗಿಸಿದ ಕಾರಣಾದಿ ಶ್ರೀಹರಿಯು
ತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಹಿದನು ॥ ನಾರಸಿಂಹ ॥

ಅನುಜನಾದ ಹಿರಣ್ಯಾಕ್ಷನ ಮರಣವನ್ನು
ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ॥ ನಾರಸಿಂಹ ॥

ಇಂದ್ರಲೋಕ ಸೂರೆ ಮಾಡಿದ
ಮೂರು ಲೋಕಕೆ ಅಸುರ ತನ್ನ ಭಯವ ತೋರಿದ
ಗರ್ಭಿಣಿ ಕಯಾದುವನ್ನು ಬ್ರಹ್ಮಪುತ್ರ ಬಂದು ಆಗ
ದೈತ್ಯನಾದ ಹಿರಣ್ಯಕಶಿಪುವಿಗೆ ಒಪ್ಪಿಸಿದನು ॥ ನಾರಸಿಂಹ ॥

ನವಮಾಸಗಳು ತುಂಬಲು ಕಯಾದು
ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು ॥ ನಾರಸಿಂಹ ॥

ಬಾಲಚಂದ್ರನಂತೆ ಹೊಳೆಯುತಾ ಇರುತಿರಲು
ಐದು ವರ್ಷ ತುಂಬಿತಾಗಲೆ
ಗುರುಗಳನ್ನು ಕರೆಸಿ ಬೇಗ ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು ॥ ನಾರಸಿಂಹ ॥

ಓಂ ನಮಃ ಶಿವಾಯ ಎನುತಲಿ
ಅಸುರ ತನ್ನ ಸುತನ ಬರೆದು ತೋರು ಎನಲು
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ॥ ನಾರಸಿಂಹ ॥

ಸುತ್ತ ಜನರ ಕರೆಸಿ ಬೇಗದಿ
ಅಸುರ ತನ್ನ ಸುತನ ಕೊಲ್ಲಿಸಬೇಕೆಂದಾಗ
ಅಟ್ಟ ಅಡವಿಯೊಳು ವಿಷವನಿಟ್ಟು ಭೋಜನಂಗಳ ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ॥ ನಾರಸಿಂಹ ॥

ಅಂಬುಧಿಯೊಳು ಮಗನ ಮಲಗಿಸಿ
ಮೇಲೆ ದೊಡ್ಡ ಬೆಟ್ಟವನಿಟ್ಟು ಬನ್ನಿರೋ
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿದನು ॥ ನಾರಸಿಂಹ ॥

ಬೆಟ್ಟದಿಂದ ಕಟ್ಟಿ ಉರುಳಿಸಿ ಅಸುರ
ತನ್ನ ಪಟ್ಟದಾನೆ ಕಾಲಲಿ ಮೆಟ್ಟಿಸಿ
ಹರಿವ ಒಲೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು ಶಕ್ತನಲ್ಲದೆ ಪೋದನಂತೆ ॥ ನಾರಸಿಂಹ ॥

ನಿನ್ನ ದೇವ ಇದ್ದ ಎಡೆಯನು ತೋರು
ಎನುತ ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂತ ಎಡೆಗಳುಂಟೆ ಲೋಕದಲ್ಲಿ
ಕಂಬದಲ್ಲೂ ಇರುವನೆಂದು ಕೈಯ ಮುಗಿದು ತೋರ್ದನಾಗೆ ॥ ನಾರಸಿಂಹ ॥

ವರಕಂಬವನ್ನು ಒಡೆಯಲು ನರಹರಿಯು ಉಗ್ರಕೋಪವನ್ನು ತಾಳಿದ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ
ಪಿಡಿದು ಒತ್ತಿ ಕರುಳ ಬಗೆದು
ಮಾಲೆ ಹಾಕಿ ಕಂದ ಭಕ್ತನಪ್ಪಿಕೊಂಡ ॥ ನಾರಸಿಂಹ ॥

ಅಂತರಿಕ್ಷದಲಿ ಅಮರರು ನೋಡಿ ಆಗ
ಪುಷ್ಪವೃಷ್ಟಿಯನ್ನೆ ಕರೆದರು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡೆಂದಭಯವಿತ್ತ ॥ ನಾರಸಿಂಹ ॥

ಲಕ್ಷ್ಮೀನಾರಸಿಂಹ ಚರಿತೆಯ
ಉದಯಕಾಲ ಪಠಿಸುವಂತ ನರರಿಗೆಲ್ಲ ಪುತ್ರಸಂತಾನಂಗಳಿತ್ತು
ಮತ್ತೆ ಬೇಡಿದಹಾಂಗೆ ಕೊಟ್ಟು
ಭಕ್ತವತ್ಸಲ ಮುಕ್ತಿಕೊಡುವ ಪುರಂದರವಿಠಲರಾಯ ॥ ನಾರಸಿಂಹ ॥

 

***

 

Narasimha mantravu

 

ನರಸಿಂಹ ಮಂತ್ರವೊಂದಿರಲು ಸಾಕು
ದುರಿತ ಕೋಟಿಯ ತರಿದು ಭಾಗ್ಯವನು ಕೊಡುವ ॥

 

ಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ
ಅಸುರ ಕುಲದವರಿಗೆ ಶತ್ರು ಮಂತ್ರ
ವಸುಧೆಯೊಳು ಪಾದಕಿಗಳಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ ॥1॥

ದಿಟ್ಟ ಧ್ರುವರಾಯನಿಗೆ ಪಟ್ಟಗಟ್ಟಿದ ಮಂತ್ರ
ಶಿಷ್ಟ ವಿಭೀಷಣನ ಪೊರೆದ ಮಂತ್ರ
ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ
ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ ॥2॥

ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ
ಕೊಂಡಾಡೊ ಲೋಕಕೆ ಪ್ರಚಂಡ ಮಂತ್ರ
ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ
ಪುಂಡರೀಕಾಕ್ಷ ಪುರಂದರವಿಠಲ ಮಂತ್ರ ॥3॥

 

***

 

Karunadinda karava pidiyo

 

ಕರುಣದಿಂದ ಕರವ ಪಿಡಿಯೊ ತೊರವಿ ನರಹರೆಆಹಾ ತೊರವಿ ನರಹರೆ ॥pa॥

 

ಶರಣಾಗತರಮಲ ತೋರುವ ಕರುಣ ವಾರಿಧೆ ॥a.pa॥

 

ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ ॥1॥

ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳುಕಟಿಯ ತಟದೊಳಿಟ್ಟು ರಿಪುವ ಒಡಲ ಬಗೆದೆಯೊ ॥2॥

ಇಂದಿರೇಶ ಎನ್ನ ಹೃದಯ ಮಂದಿರದೊಳು ಬಂದು ತೋರೆ ಮುಖವ ನಿನ್ನ ವಂದಿಸುವೆನು ॥3॥

 

***

 

Bhaala bhaara ninnolhaakide

ರಚನೆ: ಶ್ರೀ ಗುರು ಶ್ರೀಶ ವಿಠ್ಠಲ ದಾಸರು

 

ಭಾಳ ಭಾರ ನಿನ್ನೊಳ್ಹಾಕಿದೆ ।
ಶ್ರೀನಾರಸಿಂಹ ಶ್ರೀ ನಾರಸಿಂಹ ॥ಪ॥

ಭಾಳ ಭಾರ ಹಾಕಿದೆನೆಂದು ।
ದೂರ ಮಾತ್ರ ಮಾಡಬೇಡ ।
ತೋರು ನಿನ್ನ ಪಾದ ಪದ್ಮ ।
ನೀರಜಾಕ್ಷ ಆನಂದ ಒಡೆಯ ॥ಅ. ಪ.॥

ಅಡವಿಯಲ್ಲಿ ಬಂದು ಕುಳಿತೆ ನಾ । ನಿನ್ನ ।
ಅಡಿಗಳಿಗೆ ವಂದಿಸುವೆ ನಾ ।
ಕಡಲಿಬ್ಯಾಳಿ ಬೆಲ್ಲ ಮೊದಲು ।
ಒಡಲಿಗೆಂದು ಬೇಡುವೆ ನಾ ।
ಕೊಡದೆ ನೀನು ಮಡದಿ ಸಹಿತ ।
ಸಡಗರಾದಿ ಭುಂಜಿಸುತಿರುವೆ ॥1॥

ಅಶನ ವಶನ ಕಾಡಿ ಬೇಡಿದ । ಅನುದಿನ ।
ಶಶಿಮುಖಿಯರ ಕೂಡಿ ಆಡುವೆ ।
ನಿರುತ ನಿನ್ನ ಪಾದ ಪದ್ಮ ।
ಬಿಸಜೆಯಿಂದ ಭಜಿಸುವೆನು ।
ಹೊಸತರಾದ ಗುರುವಿನಿಂದ ।
ಹೆಚ್ಚಿಗೆ ಕಾರ್ಯ ಮಾಡುವೆನು ॥2॥

ತಂದೆ ತಾಯಿ ಎಂದು ನಾ । ನಿಮ್ಮ ।
ಚರಣ ಕಮಲಗಳಿಗೆ ವಂದಿಸುವೆ ನಾ ।
ಕಂದನಂತೆಂದು ಎನ್ನ ಹಿಂದೆ ಮುಂದೆ ನೋಡದಲೆ ।
ಮುಂದೆ ಬಂದು ಪಾಲಿಸಯ್ಯಾ ।
ಇಂದಿರೇಶ ಶ್ರೀಶವಿಠ್ಠಲ ॥3॥

 

***

 

Kaayo shreenaarasimha

ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ।ಪ।

 

ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ
ಭಯಾಂಧತಿಮಿರಮಾರ್ತಾಂಡ ಶ್ರೀನಾರಸಿಂಹ ।ಅ ಪ।

 

ಘೋರ ಅಕಾಲಮೃತ್ಯು ಮೀರಿ ಬರಲು ಕಂಡು
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ॥೧॥

ಧೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು
ಸುಷಮ್ನಾನಾಡಿಸ್ಥಿತವಿಭುವೆ ಶ್ರೀನಾರಸಿಂಹ ॥೨॥

ಜ್ಞಾನರಹಿತನಾಗಿ ನಾ ನಿನ್ನ ಮರೆತರೆ
ನೀನೂ ಮರೆತದ್ಯಾಕೆ ಪೇಳೋ ಶ್ರೀ ನಾರಸಿಂಹ ॥೩॥

ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ
ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ॥೪॥

ಪಾಲಮುನ್ನೀರಾಗರ ಪದುಮಮನೋಹರ
ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ॥೫॥

 

***

 

Thangi kele

 

ತಂಗಿ ಕೇಳೆ ಅತಿಕೌತುಕ ಒಂದು ಸುದ್ಧಿಯ
ಸಿಂಗನ ಮೋರೆ ಮಗುವು ಪುಟ್ಟಿ ಮಾಡಿದಾ ಚರ್ಯ ॥pa॥

 

ತಂದೆ ತಾಯಿಗಳಿಲ್ಲಾದ್ಹಾಂಗೆ ಕಂದ ಪುಟ್ಟಿತು
ಬಂಧು ಎತ್ತು ಕೊಂಬೇನೆಂದರೆ ಗುಡು ಗುಡುಗುಟ್ಟಿತೂ
ಅಂದ ಛಂದವ ನೋಡೇನೆಂದರೆ ಘೊರಾಕೃತಿಯಾಯ್ತು
ತಂದ ತೊಟ್ಟಿಲೊಳಿಟ್ಟೀನೆಂದರೆ ಹೊಸಲೊಳ್ ಕೂತೀತು ॥1॥

ತೊಡೆಯಲ್ಲಿಟ್ಟು ತಟ್ಟೀನೆಂದರೆ ಕಿಡಿ ಕಿಡಿ ಉಗುಳೀತು
ಕಡುಪಾಪಿ ರಕ್ಕಸನ ತನ್ನ ತೊಡೆಯಲ್ಲಿಟ್ಟಿತೂ
ಕಡು ಕೋಪದಿಂದಾಲಿ ಅವನ ಒಡಲ ಬಗೆದಿತು.
ಎಡಬಲಕೊಬ್ಬರು ಬರದಂತೆ ಆರ್ಭಟಿಸುತಲಿದ್ದಿತು ॥2॥

ಹಾಲನೆರೆದೆನೆಂದರೆ ರುಧಿರ ಪಾನವ ಮಾಡಿತು
ಮಾಲೆ ಹಾಕಿ ಮುದ್ದಿಪನೆನೆ ಕರುಳ್ಮಾಲೆ ಹಾಕೀತು
ಮೇಲೆ ಕೇಶ ಕಟ್ಟೀನೆಂದರೆ ಕೆದರಿಕೊಂಡೀತೂ
ಬಾಲಲೀಲೆ ನೋಡೇನೆಂದರೆ ಜಗವ ಬೆದರಿಸಿತು ॥3॥

ಸುರಹರ ಬ್ರಹ್ಮಾದಿಗಳು ಬಂದರು ತಿರುಗದೆ ಕೂತೀತು
ಸಿರಿಕಂಡೂ ಬೆರಗಾಗೆ ಮನವು ಕರಗದೆ ಕಲ್ಲಾಯ್ತು
ತರಳನೊಬ್ಬನ ಕೂಡೆ ತಾನೂ ಆಟವನಾಡಿತು
ಉರಿಮುಖ ಹುಬ್ಬೂ ಗಂಟೂ ಬಿಟ್ಟು ಕಿರುನಗೆ ನಕ್ಕೀತು ॥4॥

ಶ್ರೀಪತಿ ಎಂದು ತರಳನು ಪೊಗಳೇ ಸಿರಿಯ ಬೆರತೀತು
ಆಪತ್ತನು ಪರಿಹರಿಪ ಲಕ್ಷ್ಮೀನರಹರಿ ಎನಿಸೀತು
ದ್ವಾಪರದಲ್ಲಿ ಮತ್ತೆ ಪುಟ್ಟಿ ಮುದುವ ಬೇಡೀತು
ಗೋಪಾಲಕೃಷ್ಣವಿಠ್ಠಲನೆನಿಸಿ ಗೋಪಿಯ ಮಗುವಾಯ್ತು ॥5॥

 

***

 

Narasimha vajra

ನರಸಿಂಹ ವಜ್ರ ಸಿಂಹ

 

ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ॥pa॥

 

ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು
ಪರಿಯ ದೈವವೆ ಮೊರೆಯೋಗಲೂ
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು
ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ॥1॥

ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ
ಪಗಲಿರಳು ಒಂದೆಂದರು ಸಕಲರೂ
ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ
ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ॥2॥

ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ
ಕಕ್ಕಸದ ದೈವ ಅನಂತ ಪದುಮನಾಭ
ಮುಕ್ತಿದಾಯಕ ವಿಜಯವಿಠ್ಠಲ ಮಹದಾ ॥3॥

 

***

 

Uddhavusidhu kambadhi

ಉದ್ಭವಿಸಿದ ಕಂಬದಿ । ಶ್ರೀ ನಾರಸಿಂಹ
ಉದ್ಭವಿಸಿದ ಕಂಬದಿ ॥pa॥

ಉದ್ಭವಿಸಿದ ಬೇಗ ಪದ್ಮಸಂಭವಪಿತ
ಮುದ್ದು ಬಾಲಕನ ಉದ್ಧರಿಸುವೆನೆಂದು ॥a.pa॥

ದುರುಳನು ಪ್ರಹಲ್ಲಾದನು । ಪರಿಪರಿಯಿಂದ
ಕರಕರಪಡಿಸೆ ಕುವರನ
ನರಹರಿ ಎನ್ನನು ಪೊರೆ ಎಂದು ಮೊರೆಯಿಡೆ
ಸುರರು ನೋಡುತಿರೆ ಭೋರ್ಗರೆಯುತ ಆ ಕ್ಷಣ ॥1॥

ಎಲ್ಲಿರುವನು ಹರಿ ಎಂದು । ದೈತ್ಯನು ಮಗನ
ಇಲ್ಲಿ ಸ್ಥಂಭದಿ ತೋರೆಂದು
ಖುಲ್ಲನು ಹಿಂಸಿಸೆ ಸರ್ವತ್ರದಿ ಶ್ರೀ-
ನಲ್ಲನಿರುವನೆಂದು ಸಾಧಿಸೆ ಭಕ್ತನು ॥2॥

ತನಯನ ನುಡಿ ಉಳಿಸಲು । ನರಹರಿ ಹೊಸಲೊಳ್
ಇನನು ತಾ ಮುಳುಗುತ್ತಿರಲು
ದನುಜನ ತೊಡೆಯ ಮೇಲಿಟ್ಟು ನಖದಲಿ
ಕನಲಿ ಸೀಳಿ ಕರುಳ್ಮಾಲೆ ಧರಿಸುತ ॥3॥

ಸುರರು ಜಯ ಜಯವೆನ್ನುತ । ಪೊಗಳುತ್ತಲಿರೆ
ನರಹರಿ ಉಗ್ರ ತಾಳುತ
ಸುರರು ಬೆದರಿ ಪ್ರಹ್ಲಾದನ ಕಳುಹಲು
ಕರಿಗಿರಿ ನರಹರಿ ಶಾಂತನೆನಿಸಿದ ॥4॥

ತಾಪವಡಗಿತು ಜಗದಲಿ । ವರ ಭಕ್ತನಿಂದ
ಶ್ರೀಪತಿ ಲಕುಮಿ ಸಹಿತಲಿ
ಗೋಪಾಲಕೃಷ್ಣವಿಠ್ಠಲ ಗುರುವರದ
ಈ ಪರಿಯಿಂದ ಭಕ್ತರ ಪೊರೆಯಲು ॥5॥

 

***

 

Mahadadi deva namo

ಮಹಾದಾದಿದೇವ ನಮೋ

 

ಮಹಾಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನರಸಿಂಹ ॥

.ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು ॥
ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ ॥

ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ॥
ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ ಬಗೆದ ಕಡುಗಲಿ ನಾರಸಿಂಹ ॥

ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಗರೆಯಲು ॥
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸುವ ಪುರಂದರವಿಠಲ ನಾರಸಿಂಹ ॥

 

***

 

Kande na uddanda narasimhana

 

ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ –
ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ॥pa॥

 

ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ ॥1॥

ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು
ನರನರವನು ತೆಗೆದು ನಿರ್ಗಳಿತ ಶೋಣಿತ
ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ ॥2॥

ಪುರಜನರು ಹಾಯೆನಲು ಸುರರು ಹೂಮಳೆ
ಗರೆಯೆತರತರದ ವಾದ್ಯ ಸಂಭ್ರಮಗಳಿಂದ
ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ
ಕರುಣಾಳು ಕಾಗಿನೆಲೆಯಾದಿಕೇಶವನ ॥3॥

 

***

 

Nambide ninna pada narasimha

 

ನಂಬಿದೆ ನಿನ್ನ ಪಾದ ನರಸಿಂಹ
ಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ ॥೧॥

ಹಂಬಲಿಸುವೆನು ಬಲು ನರಸಿಂಹ
ಪಾದ ನಂಬಿದವರನು ಕಾಯೋ ನರಸಿಂಹ ॥೨॥

ತುಂಬುರು ನಾರದಪ್ರಿಯ ನರಸಿಂಹ
ಚೆಲ್ವ ಶಂಬರಾರಿಯ ಪಿತನೆ ನರಸಿಂಹ ॥೩॥

ಅಂಬರೀಷನ ಕಾಯ್ದ ನರಸಿಂಹ
ಜಗದಂಬಾರಮಣನೆ ಸಿರಿ ನರಸಿಂಹ ॥೪॥

ಬಾಲ ಕರೆದಲ್ಲಿ ಬಂದೆ ನರಸಿಂಹ
ಭಕ್ತಪಾಲಿಪ ದಯಾಳು ಸಿರಿ ನರಸಿಂಹ ॥೫॥

ಲೀಲೆಯಿಂದ ಹಿರಣ್ಯನ ನರಸಿಂಹ
ಕೊಂದ ಲೋಲ ಸಿರಿಯರಸನೆ ನರಸಿಂಹ ॥೬॥

ಅಚ್ಯುತಾನಂತ ಗೋವಿಂದ ನರಸಿಂಹ
ಸಿರಿಸಚ್ಚಿದಾನಂದ ಮುಕುಂದ ನರಸಿಂಹ ॥೭॥

ಕಿಚ್ಚಿನಂದದಿ ಬಂದೆ ನರಸಿಂಹ
ಭವ ವಿಚ್ಚೆಯಿಂದ ಬಿಡಿಸಯ್ಯ ನರಸಿಂಹ ॥೮॥

ಕರಿಮೊರೆಯನು ಕೇಳಿ ನರಸಿಂಹ
ಬಲು ಬರದಿಂದೊದಗಿ ಬಂದೆ ನರಸಿಂಹ ॥೯॥

ಗರುಡವಾಹನನಾಗಿ ನರಸಿಂಹ
ಉದ್ಧರಿಸಿ ಕಾಯ್ದೆನಲ್ಲೋ ನರಸಿಂಹ ॥೧೦॥

ದೇವರ ದೇವನು ನೀನು ನರಸಿಂಹ
ಬೇರೆ ಕಾವರನು ಕಾಣೆನಯ್ಯ ನರಸಿಂಹ ॥೧೧॥

ಭಾವಜನಯ್ಯನೆ ಸಿರಿ ನರಸಿಂಹ
ನಿನ್ನ ಸೇವೆಯ ಪಾಲಿಸಿ ಕಾಯೋ ನರಸಿಂಹ ॥೧೨॥

ತಂದೆ ತಾಯಿ ಗುರು ದೈವ ನರಸಿಂಹ
ಎನ್ನ ಬಂಧುಬಳಗವು ನೇನೆ ನರಸಿಂಹ ॥೧೩॥

ಕುಂದು ಹೆಚ್ಚು ನೋಡಬೇಡ ನರಸಿಂಹ
ಪುರಂದರವಿಠಲ ಕಾಯೋ ನರಸಿಂಹ ॥೧೪॥

 

***

 

Banda simha narasimha

 

ಬಂದ ಸಿಂಹ ನಾರಸಿಂಹ ಬಂದ ನೋಡೇ
ಇಂದಿರೇಶ ಕಂಬ ಒಡೆದು ಬಂದ ನೋಡೇ
ಅಕೋ ಬಂದ ನೋಡೇ, ಇಕೋ ಬಂದ ನೋಡೇ॥

ಎಲ್ಲಿ ನೋಡಿದರಲ್ಲಿ ನಾರಸಿಂಹ ನೋಡೇ
ಎಲ್ಲರಲ್ಲಿ ಮೇಲೆ ಎಂಬ ಚೆಲುವ ನೋಡೇ
ಎಲ್ಲರನ್ನು ಹರಿಗೆ ಎಂದು ದಾನ ಮಾಡೇ ॥೧॥

ಹರಿಯು ಕಂದನ ಕರೆಗೆ ಓಡಿ ಬಂದ ನೋಡೇ
ಧರಿಸಲಿಲ್ಲ ಪೂರ್ಣ ಸಿಂಹ ವೇಷ ನೋಡೇ
ಹರಿಯ ಪಾದಕೆ ನಮಿಸಿದಂದದಿ ಭಿಕ್ಷೆ ನೋಡೇ ॥೨॥

ಚರಣ ಸುಧೆಯ ಕಮಲನೀತ ಚಂದ್ರ ನೋಡೇ
ಭಕ್ತವತ್ಸಲ ಪುರಂದರವಿಠಲ ಬಂದ ನೋಡೇ
ಮುಕ್ತಿ ಕೊಡುವ ದಾತ ಮನೆಗೆ ಬಂದ ನೋಡೇ ॥೩॥

 

***

 

Balire balire narasimha

 

ಭಳಿರೆ ಭಳಿರೆ ನರಸಿಂಹ ಮಹಾಸಿಂಹ ।
ಮಲಮಲಾ ಮಲತವರ ವೈರಿ ಉರಿಮಾರಿ ॥pa॥

 

ನಗನಗಾ ನಗನಗಗಳಲ್ಲಾಡೆ ಚತುರ್ದಶ ।
ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ॥
ಹಗೆ ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ ।
ಉಗು ಉಗು ಉಗುಳುತ್ತ ಬಂದ ನರಸಿಂಹ ॥1॥

ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ ।
ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ॥
ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ ।
ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ ॥2॥

ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ ।
ಬಗ ಬಗ ಬಗ ಬಗದು ರಕುತವನ್ನು ।
ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ ।
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ ॥3॥

ಯುಗ ಯುಗ ಯುಗ ಯುಗದ&#


Поделиться с друзьями:

Поперечные профили набережных и береговой полосы: На городских территориях берегоукрепление проектируют с учетом технических и экономических требований, но особое значение придают эстетическим...

Эмиссия газов от очистных сооружений канализации: В последние годы внимание мирового сообщества сосредоточено на экологических проблемах...

Общие условия выбора системы дренажа: Система дренажа выбирается в зависимости от характера защищаемого...

Археология об основании Рима: Новые раскопки проясняют и такой острый дискуссионный вопрос, как дата самого возникновения Рима...



© cyberpedia.su 2017-2024 - Не является автором материалов. Исключительное право сохранено за автором текста.
Если вы не хотите, чтобы данный материал был у нас на сайте, перейдите по ссылке: Нарушение авторских прав. Мы поможем в написании вашей работы!

0.135 с.